ನಮ್ಮೂರಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹಿಂದೂಗಳ ಒಂದು ಸಮಾಜದವರು ತಮ್ಮ ಮನೆದೇವ್ರುಪೂಜೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಎರಡು ಬ್ಯಾಟಿ ಬೀಳುತ್ತವೆ. ಮನೆಗೆ ಬರುವ ಬಂಧುಗಳಿಗೆಊಟಕ್ಕೆ ಬರಿ ಅನ್ನ ಇದ್ದರೆ ನಡೆಯಲ್ಲ, ಅದರ ಜೊತೆಗೆ ರೊಟ್ಟಿನೂ ಇರಬೇಕು. ನಾವು ಹಳ್ಳಿ ಜನ ಎರಡುರೊಟ್ಟಿ ತಿಂದರೆನೇ ಹೊಟ್ಟೆ ತುಂಬೋದು.
ಮನೆಯಲ್ಲಿರುವ ಜನರಿಗೆ, ಬಂದಿರುವ ಸಂಬಂಧಿಕರಿಗೆ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೊಟ್ಟಿಗಳುಬೇಕು.ನೂರಾರು ರೊಟ್ಟಿ ತಯಾರಿಸಲು ಒಂದು ಕುಟುಂಬ ದವರಿಗೆ ಕಷ್ಟದ ಕೆಲಸ. ಅದಕ್ಕೆ, ಆ ಓಣಿಯಜನರಿಗೆ ರೊಟ್ಟಿ ಮಾಡಿಕೊಡಲು ಸಜ್ಜೆ, ಅಥವಾ ಜೋಳದ ಹಿಟ್ಟು ನೀಡುತ್ತಾರೆ. ಒಂದೊಂದು ಮನೆಗೂ ಹಿಟ್ಟುನೀಡುತ್ತಾರೆ, ಇಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಇರಲ್ಲ.
ನಮ್ಮ ಮನೆಗೂ ಒಂದು ಹಿಂದೂ ಕುಟುಂಬದವರು ಸಜ್ಜೆ ಹಿಟ್ಟು ನೀಡಿದ್ದರು. ರೊಟ್ಟಿ ಮಾಡಿ ಕೊಡಲಾಗಿದೆ. ಕೆಳಗಡೆ ಚಿತ್ರದಲ್ಲಿ ಪುಟ್ಟಿಯಲ್ಲಿ ಒಂದು ರೊಟ್ಟಿ ಕಾಣಿಸುತ್ತಿದೆ ನೋಡಿ. ಅದ್ಯಾಕೆ ಅಂದರೆ, ಯಾರ ಮನೆಯವರುರೊಟ್ಟಿ ಮಾಡಿ ಕೊಡುತ್ತಾರೋ ಅವರ ಮನೆಗೆ ಪುಟ್ಟಿ ವಾಪಾಸ್ ಕಳಿಸುವಾಗ ಅದರಲ್ಲಿ ಒಂದು ರೊಟ್ಟಿ ಇಟ್ಟುಕೊಡುತ್ತಾರೆ.
ನಮ್ಮ ಕಲ್ಯಾಣ ಕರ್ನಾಟಕದ ಹಳ್ಳಿಗಳಿಗೆ “ಧರ್ಮ“ದ ಭೂತ ಇನ್ನೂ ಹೊಕ್ಕಿಲ್ಲ.ಎನ್ನುವುದಕ್ಕೆ ಇಂತಹ ನೂರುಉದಾಹರಣೆಗಳನ್ನು ನೀಡಬಲ್ಲೆ..!
article courtesy: from Mahammad Sahukar’s Facebook wall.

